ಮುಂಬೈನಲ್ಲಿ ಇವತ್ತು ೭ ಕಡೆ ಸ್ಫೋಟಗಳಾಗಿ ನೂರಾರು ಜನ ಸತ್ತಿದ್ದಾರೆ. ಇದಕ್ಕೆ ಏನು ಕಾರಣ? ಎಲ್ಲರಿಗೂ ಗೊತ್ತಿರುವ ಕಾರಣಗಳನ್ನು ಹೇಳಲು ನಾನು ಹೊರಟಿಲ್ಲ. ಆದರೆ ಆ ಕಾರಣಗಳಿಗೆಲ್ಲ ಮೂಲವಾಗಿರುವ ಕಾರಣವೊಂದನ್ನು ಇಲ್ಲಿ ಕೊಡುತ್ತೇನೆ.
ನಾಲ್ಕು ಜನರಿಗೆ ಒಬ್ಬ ಕ್ಷತ್ರಿಯನಿರಬೇಕೆನ್ನುವುದು ಸನಾತನಧರ್ಮವಿಹಿತ. ಹಾಗಿಲ್ಲದಿದ್ದರೆ ಮಿಕ್ಕ ನಾಲ್ವರಿಗೆ ಅಪಾಯ ತಪ್ಪಿದ್ದಲ್ಲ. ಆ ಕ್ಷತ್ರಿಯನು ಹತ್ತಿರದಲ್ಲೇ ಇರಬೇಕೇ ಹೊರತು ದೂರದಲ್ಲಿ ಏಲ್ಲೋ ಅಲ್ಲ. ನಮ್ಮ ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ದುರದೃಷ್ಟವಶಾತ್ ಪ್ರತಿ ರಾಜ್ಯದ ಕ್ಷತ್ರಿಯರು ದೂರದ ಭಾರತ-ಪಾಕಿಸ್ತಾನ ಮುಂತಾದ ಗಡಿಪ್ರದೇಶದಲ್ಲಿ ಹೋಗಿ ನಿಲ್ಲಬೇಕಾದ ಪರಿಸ್ಥಿತಿಯಿದೆ. ಮಹಾರಾಷ್ಟ್ರವನ್ನು ಕಾಯಬೇಕಾದ ಕ್ಷತ್ರಿಯರು ದೂರದ ಪಾಕಿಸ್ತಾನದ ಗಡಿಯಲ್ಲಿ ಹೋಗಿ ನಿಂತಿದ್ದರೆ ಮಹಾರಾಷ್ಟ್ರವನ್ನು ರಕ್ಷಿಸುವವರಾರು? ಮಹಾರಾಷ್ಟ್ರದ ಕ್ಷತ್ರಿಯರು ನಾಯಿಗಳಂತೆ ಜಗಳಾವಾಡುವ ರಾಜಕಾರಣಿಗಳಾಗಿರುವಾಗ ಮಹಾರಾಷ್ಟ್ರದ ರಕ್ಷಣೆ ಹೇಗೆ ಸಾಧ್ಯ? ಆದ್ದರಿಂದ ಕ್ಷತ್ರಿಯರು ಹತ್ತಿರದಲ್ಲೇ ಇರಬೇಕಾದದ್ದು ಮುಖ್ಯ.
ಭಾರತದ ಗಡಿಪ್ರದೇಶದಲ್ಲಿ ಕ್ಷತ್ರಿಯರು ಇರಬಾರದು ಎಂದು ನಾನು ಹೇಳುತ್ತಿಲ್ಲ. ಅಲ್ಲಿ ಕಡಿಮೆ ಮಾಡಿ ಇಲ್ಲಿ ಹೆಚ್ಚಿಸಿ ಎಂದು ಹೇಳುತ್ತಿಲ್ಲ; ಅಲ್ಲಿರುವವರು ಅಲ್ಲೇ ಇರಲಿ, ಇಲ್ಲೂ ಕ್ಷತ್ರಿಯ ಪಡೆಗಳು ನಿಲ್ಲಬೇಕಾದದ್ದು ಅತಿಮುಖ್ಯ.
ಪೋಲೀಸರು, ಇವತ್ತಿನ ವಿಧಾನ ಮಂಡಲ/ಸಭೆಗಳ ಅಯೋಗ್ಯ ಬೊಗಳುವ ನಾಯಿಗಳು ಕ್ಷತ್ರಿಯರಲ್ಲ. ನಿಜವಾದ ಕ್ಷತ್ರಿಯರು ಎದ್ದು ನಿಲ್ಲಿ! ಓ ಮಹಾರಾಷ್ಟ್ರದ ಕ್ಷತ್ರಿಯನೇ, ಎದ್ದು ನಿಲ್ಲು!
ಓ ಕನ್ನಡನಾಡಿನ ಕ್ಷತ್ರಿಯನೆ, ಎದ್ದು ನಿಲ್ಲು! ನಿನ್ನ ಕ್ಷಾತ್ರಧರ್ಮವನ್ನು ಪಾಲಿಸು! ಶತ್ರುವನ್ನು ಸದೆಬಡೆ! ಎದ್ದೇಳು ಕನ್ನಡನಾಡಿನ ರಕ್ಷಕನೆ! ಎದ್ದೇಳು!
Subscribe to:
Post Comments (Atom)
No comments:
Post a Comment